ಸಿಂಧನೂರು ಕುರಿ ತಳಿಯನ್ನು ಸಾಕಿ ಲಾಭ ಗಳಿಸುವದು ಹೇಗೆ

 ಸಿಂಧನೂರು ಕುರಿ ತಳಿಯನ್ನು ಸಾಕಿ ಲಾಭ ಗಳಿಸುವದು ಹೇಗೆ 


ಕುರಿ ಸಾಕಾಣಿಕೆಯಲ್ಲಿ ಹೆಚ್ಚಿನ ಲಾಭವನ್ನು ಗಳಿಸಬೇಕಾದರೆ ಸಿಂಧನೂರು ತಳಿಯನ್ನು ಸಾಕಬಹುದಾಗಿದೆ, ಇದು ಒಂದು ಉತ್ತಮ ತಳಿಯಾಗಿದ್ದು ಇದರಿಂದ ಹೆಚ್ಚಿನ ಹಣ ಗಳಿಸುವ ಸಾಧ್ಯತೆ ಇದೆ, ಇದರ ಷಡ್ ನಿರ್ಮಾಣ ಹೇಗೆ ಹಾಗೂ ಇದರ ಆಹಾರ ಪದ್ಧತಿಯನ್ನು ನಿಮಗೆ ಕೆಳಗಡೆ ತಿಳಿಸಲಾಗುವುದು





ಸಿಂಧನೂರು ಕುರಿಯ ತಳಿಗೆ ತಗಲುವ ವೆಚ್ಚ ಕನಿಷ್ಠ ಕನಿಷ್ಠ ನಾಲ್ಕರಿಂದ ಐದು ಸಾವಿರ ರೂಪಾಯಿಗಳು,  ಸ್ವಲ್ಪ ದೊಡ್ಡ ಬೆಳವಣಿಗೆ ಉಳ್ಳ ಕುರಿಗಳಿಗೆ ಕಡಿಮೆ ಎಂದರೆ ಏಳರಿಂದ ಎಂಟು ಸಾವಿರ ರೂಪಾಯಿಗಳು.ಆದಷ್ಟು ಬೆಳವಣಿಗೆಯುಳ್ಳ ಕುರಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಏಕೆಂದರೆ ಇವು ಗಳಿಗೆ ರೋಗನಿರೋಧಕ ಶಕ್ತಿ ಸ್ವಲ್ಪ ಹೆಚ್ಚಾಗಿ ಕಂಡುಬರುತ್ತದೆ ಅದೇ ನೀವು ತುಂಬಾ ಸಣ್ಣ ಮರಿಗಳನ್ನು ಕೊಂಡುಕೊಂಡರೆ ಅವುಗಳು ರೋಗದಿಂದ ಸಾವಿಗೆ ತುತ್ತಾಗಬಹುದು

ಈ ಮೇಕೆಗಳಿಗೆ ಕೊಡಬಹುದಾದಂತಹ ಆಹಾರಗಳು ಏನಂದರೆ ಅಗಸೆ ಸೊಪ್ಪು ರೇಷ್ಮೆ ಸೊಪ್ಪು ಸೀಮೆ ಹುಲ್ಲನ್ನು ಸಣ್ಣಗೆ ಕತ್ತರಿಸಿ ಹಾಕಬಹುದು ಹಾಗೂ ಒಣ ರಾಗಿ ಹುಲ್ಲನ್ನು ಹಾಕಬಹುದು.

 ಕುರಿಮರಗಳನ್ನು ಬಿಸಿಲಿನಲ್ಲಿ ಬಿಟ್ಟು ಬೆಳೆಸಬೇಕು , ಕುರಿಗಳಿಗೆ ತಿಂಡಿ ಹಾಗೂ ಮೇವನ್ನು ಕೊಟ್ಟ ನಂತರ ಅವುಗಳನ್ನು ಬಿಸಿಲಿನಲ್ಲಿ ಓಡಾಡಲು ಬಿಡಬೇಕಾಗುತ್ತದೆ ಏಕೆಂದರೆ ಈ ಕುರಿಗಳಿಗೆ ಸ್ವಲ್ಪಮಟ್ಟಿಗೆ ಶಾಖದ ಅವಶ್ಯಕತೆ ಇರುತ್ತದೆ.  ಬೆಳಗ್ಗೆ  6:00 ಯಿಂದ ಅಥವಾ 7:00 ಯಿಂದ ಅವುಗಳನ್ನು ಬಿಸಿಲಿನನಿಗೆ ಬಿಡಬೇಕಾಗುತ್ತದೆ ಹಾಗೂ 10 ಗಂಟೆಯವರೆಗೂ ಅವುಗಳನ್ನು ಬಿಸಿಲಿನ ಶಾಖಕ್ಕೆ ಬಿಟ್ಟರೆ ಒಳ್ಳೆಯದು

ಇವುಗಳಿಗೆ ದಿನಕ್ಕೆ ಎರಡು ಬಾರಿ ತಿಂಡಿಯನ್ನು ಕೊಟ್ಟರೆ ಬಹಳ ಒಳ್ಳೆಯದು ಇವುಗಳಿಗೆ ಆಹಾರವನ್ನು ಕೊಡುವ ಸಮಯ ಬೆಳಗ್ಗೆ ಏಳರಿಂದ ಎಂಟು ಗಂಟೆಗೆ ಜೋಳ ಹಿಂಡಿ ಹಾಗೂ ಕುರಿ ಪೀಡನ್ನು ನೇಪಿಯರ್ ಹುಲ್ಲು ಕೊಡಬಹುದಾಗಿದೆ ಇದೇ ಪದ್ಧತಿಯನ್ನು ಮತ್ತೆ ಸಂಜೆ ಐದು ಗಂಟೆಗೆ ಮುಂದುವರಿಸಬಹುದಾಗಿದೆ

ಈ ಕುರಿಗಳನ್ನು ಸಾಕಬೇಕಾದರೆ ನೀವು ಕಡಿಮೆ ದರದಲ್ಲಿ ಕೊಟ್ಟಿಗೆಯನ್ನು ನಿರ್ಮಾಣ ಮಾಡಬಹುದಾಗಿದೆ ಅಂದಾಜು 18 ಬೈ 30 ಅಡಿಗೆ ನೀವು ಕೊಟ್ಟಿಗೆ ನಿರ್ಮಾಣ ಮಾಡಿದರೆ 50 ರಿಂದ 80 ಕುರಿಗಳನ್ನು ಸಾಕಬಹುದಾಗಿದೆ ಕೊಟ್ಟಿಗೆ ನಿರ್ಮಾಣವು ನಿಮ್ಮಲ್ಲಿ ಸಿಗುವಂತಹ ಕಲ್ಲು ಕಂಬಗಳು ಹಾಗೂ ಮೇಲ್ಗಡೆ  ನೈಸರ್ಗಿಕ ಹೊದಿಕೆ ಹೊದಿಸಿ ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಬಹುದಾಗಿದೆ ಇನ್ನು ನಿಮ್ಮಲ್ಲಿ ಹೆಚ್ಚಿಗೆ ಬಂಡವಾಡವಿದಲ್ಲಿ  ನೀವು ಕಬ್ಬಿಣದ ಶೇಡ್ ಅನ್ನು ಮಾಡಿಸಬಹುದಾಗಿದೆ

ಸಿಂಧನೂರಿಯ ತಳಿಗೆ ಬರಬಹುದಂತ ರೋಗ ಲಕ್ಷಣಗಳು ಏನೆಂದರೆ ಸಾಮಾನ್ಯವಾಗಿ ,ಜ್ವರ ,ಕೆಮ್ಮು , 

ಜ್ವರದ ಲಕ್ಷಣಗಳೇನೆಂದರೆ ಕುರಿಗಳು ಪ್ರತ್ಯೇಕವಾಗಿ ಯಾವುದೇ ತರದ ಚಟುವಟಿಕೆ ಇಲ್ಲದೆ ಇದ್ದುಬಿಡುತ್ತವೆ ಆ ಕೂಡಲೇ ಅದನ್ನು ಗಮನಿಸಿ ಅವುಗಳಿಗೆ ಬೇಕಾದಂತ ಚಿಕಿತ್ಸೆಯನ್ನು ನೀಡಬೇಕು. ಸಾಮಾನ್ಯವಾಗಿ ರೋಗ ಬರುವಂತಹ ಕಾಲಗಳು ಯಾವುದೇ ಇಲ್ಲ ಅದು ಯಾವಾಗ ಬೇಕಾದರೂ ಬರಬಹುದು 

ಕುರಿಗಳನ್ನು 7,000 ದಿಂದ 8,000 ಗೆ ಕೊಂಡರೆ  ಅದನ್ನು ಕಡಿಮೆ ಎಂದರು  ಸ್ವಲ್ಪ ದಿನಗಳ ನಂತರ ಅದನ್ನು 12 ರಿಂದ ಅದು 13,000 ರೂಪಾಯಿಗಳಿಗೆ ಗಳಿಗೆ ಮಾರಾಟ ಮಾಡಬಹುದಾಗಿದೆ

ನೀವು ಕೊಂಡುಕೊಳ್ಳುವಾಗ ಸ್ವಲ್ಪ ದೊಡ್ಡ ಕುರಿಗಳನ್ನು ಆಯ್ಕೆ ಮಾಡಿಕೊಂಡರೆ ಒಳ್ಳೆಯದು ನಿಮಗೆ ಈ ಕುರಿಗಳು ಅತಿ ಕಡಿಮೆ ಸಮಯದಲ್ಲಿ 20 ರಿಂದ 25 ಕೆಜಿಗೆ ಬರುವ ಸಾಧ್ಯತೆ ಇರುತ್ತದೆ ನೀವು ಇದನ್ನು ಮಾರಾಟ ಮಾಡುವಾಗ ಕನಿಷ್ಠ 12ರಿಂದ 13,000 ದೊರೆಯುತ್ತದೆ.

ಕುರಿಗಳನ್ನು ಅತ್ಯಂತ ಹೆಚ್ಚು ನಿಗ ವಹಿಸಿದ್ದಲ್ಲಿ ಸಾವುನ ಸಂಖ್ಯೆ ಕಡಿಮೆಯಾಗುತ್ತದೆ ಹಾಗೂ ಲಾಭದ ಅಂಶ ಹೆಚ್ಚಾಗಿ ಇರುತ್ತದೆ ಒಂದು ವರ್ಷದಲ್ಲಿ ನಾಲ್ಕು ಬ್ಯಾಚ್ ಅನ್ನು ನೀವು ಸುಲಭವಾಗಿ ಸಾಕಾಣಿಕೆ ಮಾಡಬಹುದು .
 ನಿಮ್ಮ ಮೇವಿನ ಅನುಕೂಲಕ್ಕೆ ತಕ್ಕಂತೆ ನೀವು ಕುರಿಗಳನ್ನು ಸಾಕಬಹುದು.ಆದಷ್ಟು ನೀವು  ಮೇವು ಗಳನ್ನು ಸ್ವಂತವಾಗಿ ಬೆಳೆದರೆ ಒಳ್ಳೆಯದು ರೇಷ್ಮೆ ಜೋಳ ಹಾಗೂ ಇನ್ನಿತರೆ ಅಗಸೆ ಸೊಪ್ಪಿನಂತಹ ಮೇವುಗಳನ್ನು ಬೆಳೆದುಕೊಳ್ಳಬಹುದು








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು