ಸರ್ಕಾರದಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ ವೆಲ್ ಕೊರೆಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ನೀವು ಅರ್ಜಿ ಸಲ್ಲಿಸಲು ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಆನ್ಲೈನಲ್ಲಿ ಸಲ್ಲಿಸಬಹುದಾಗಿದೆ . ಅರ್ಜಿದಾರರು 18ರಿಂದ 55 ವರ್ಷ ವಯಸ್ಸಿನವರಾಗಿರಬೇಕು ಮತ್ತು ರಾಜ್ಯದ ನಿವಾಸಿಗಳಾಗಿರಬೇಕು.
ಈ ಯೋಜನೆಯು ಸಣ್ಣ ಅಥವಾ ಕನಿಷ್ಠ ರೈತರಿಗಾಗಿ ಮೀಸಲಾಗಿರುತ್ತದೆ , ಹಾಗು ಕೆಳಗೆ ಕೊಟ್ಟಿರುವ ವೆಬ್ಲಿಂಕ್ ಅನ್ನು ಬಳಸಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ವೆಬ್ ಸೈಟ್ ನಲ್ಲಿ ಎಲ್ಲ ಅಗತ್ಯ ಮಾಹಿತಿಗಳನ್ನು ಪರಿಶೀಲಿಸಿ, ನಂತರ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿ ಸಲ್ಲಿಸಬಹುದು, ಹಾಗು ಈ ಪ್ರಕ್ರಿಯೆಯನ್ನು ಆನ್ಲೈನಲ್ಲೇ ಮಾಡಬಹುದಾಗಿದೆ.
ಅಲ್ಪಸಂಖ್ಯಾತರ ಮತ್ತು ಗ್ರಾಮೀಣ ಸಣ್ಣ ರೈತರಿಗೆ ಬೆಂಬಲ ನೀಡುವ ಸಲುವಾಗಿ ಈ ಯೋಜನೆಯನ್ನು ಸಿದ್ದಪಡಿಸಲಾಗಿದೆ, ಸಂಪೂರ್ಣ ಅನುದಾನಿತ ಯೋಜನೆಯಾಗಿದ್ದು ಅಲ್ಪಸಂಖ್ಯಾತರು ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಸಣ್ಣ ರೈತರಿಗೆ ಬೋರ್ವೆಲ್ ಗಳು ಮತ್ತು ವಿದ್ಯುತ್ ಕರ್ಣವನ್ನು ಒದಗಿಸುವ ಹಾಗು ವೈಯಕ್ತಿಕ ಬೋರವೆಲ್ ಯೋಜನೆಗಾಗಿ ಸರ್ಕಾರವು ಬೆಂಗಳೂರು ಗ್ರಾಮಾಂತರ ಕೋಲಾರ ಚಿಕ್ಕಬಳ್ಳಾಪುರ ,ರಾಮನಗರ ತುಮಕೂರು ಜಿಲ್ಲೆಗಳಿಗೆ 3.75 ಲಕ್ಷ ರೂಪಾಯಿ ಮತ್ತು ಇತರೆ ಜಿಲ್ಲೆಗಳಿಗೆ 2.25 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಿದೆ
ಅರ್ಜಿದಾರರ ಅರ್ಹತೆ
1. ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
2. ಪ್ರತಿಯೊಬ್ಬ ಫಲಾನುಭವಿಯು ಒಂದು ಎಕರೆ 20 ಗುಂಟೆ ಯಿಂದ 5 ಎಕರೆಯವರೆಗೆ ಖುಷ್ಕಿ ಜಮೀನಿರಬೇಕು,ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಇಂತಹ ಜಿಲ್ಲೆಗಳಲ್ಲಿ ಜಮೀನಿನ ಲಭ್ಯತೆ ಬಹಳ ಕಡಿಮೆ ಇರುವುದರಿಂದ ಕನಿಷ್ಠ 1 ಎಕರೆ ಜಮೀನನ್ನು ಹೋದಿರತಕ್ಕದ್ದು. ಲಭ್ಯವಿರಬೇಕು
3. ಅರ್ಜಿದಾರರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳಾಗಿರಬೇಕು
4. ಅರ್ಜಿದಾರರು ಸಣ್ಣ ಅತಿ ಸಣ್ಣ ಹಿಡುವಳಿ ರೈತರಾಗಿರಬೇಕು.
5. ಎಲ್ಲ ಮೂಲಗಳಿಂದ ಕುಟುಂಬದ ಆದಾಯವು 6 ಲಕ್ಷಗಳನ್ನು ಮೀರಿರಬಾರದು
6. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳಾಗಿರಬೇಕು ಗರಿಷ್ಠ ವಯಸ್ಸಿನ ಮಿತಿ 55 ವರ್ಷಗಳನ್ನು ದಾಟಿರಬಾರದು.
ಒದಗಿಸಬೇಕಾದ ದಾಖಲೆಗಳು.
1. ಪ್ರಾಧಿಕಾರದಿಂದ ಪಡೆದ ನೀಡಲಾದ ಜಾತಿ ಪ್ರಮಾಣ ಪತ್ರ
2. ಪ್ರಾಧಿಕಾರದಿಂದ ಪಡೆಯಲಾದ ಆದಾಯ ಪ್ರಮಾಣ ಪತ್ರ.
3. ಆಧಾರ್ ಕಾರ್ಡ್ ನಕಲು ಪ್ರತಿ.
4. ಇತ್ತೀಚಿಗಿನ ಪಹಣಿ ನಕಲು.
5. ಸಕ್ಶಮ ಪ್ರಾಧಿಕಾರದಿಂದ ನೀಡಲಾದ ಸಣ್ಣ ಅಥವಾ ಅತಿ ಸಣ್ಣ ಬಾಡಿಗೆದಾರರ ಪ್ರಮಾಣ ಪತ್ರ
7. ಬ್ಯಾಂಕ್ ಪಾಸ್ ಬುಕ್ ಪುಸ್ತಕದ ಪ್ರತಿ.
8. ಭೂಮಿ ಕಂದಾಯದ ಪಾವತಿ ರಶೀದಿ.
9. ಸ್ವಯಂ ಘೋಷಣೆ ಪತ್ರ ಕಾತರಿದಾರರ ಸ್ವಯಂ ಘೋಷಣೆ ಪತ್ರ
Url:https://kmdconline.karnataka.gov.in